ಹಳೆಯ ನೆನಪುಗಳ ಶರಧಿಯೊಂದು
ಭೋರ್ಗರೆಯುತಿದೆ ಮನದ ಧರೆಯೊಳು
ತುಂಬಿದ್ದ ಬದುಕ ಹಸಿರಗಾಣಿಸಿ,
ಸಿಹಿ ನಗುವಿನಾಮೃತವನಿತ್ತು ಒಮ್ಮೊಮ್ಮೆ
ಬರಿದಾದ ಬದುಕ ಬಯಲಗಾಣಿಸಿ,
ಕಹಿ ನೋವಿನ ವಿಷವನಿತ್ತು ಮಗದೊಮ್ಮೆ..
ಈ ಯಾತನೆಯ ಸುನಾಮಿ ಅಲೆಗಳ ಧಾಳಿಗೆ
ಬಳಲಿ ಬೆಂಡಾಗಲು ಜೀವ(ನ),
ಪುನರ್ನಿವಾಸಕ್ಕೆ ನಾಂದಿ ಹಾಕಬಯಸಿದರೂ ಮನ,
ಹೊಸ ಕನಸುಗಳ ತೆಕ್ಕೆಗೆಳೆದುಕೊಳ್ಳಲು ಮಾತ್ರ,
ಯಾಕೋ ಈ ಶರಧಿ ತೆರೆಗಳನು ಹಿಂತೆಗೆಯುತಿದೆ....!!!?
ಜೇನು ಸವಿಯಾದರೇನಂತೆ, ಬಿಸಿ ಶಾಖಕ್ಕೆ ಒಡ್ಡುತಿರೆ,
ಬುರುಗೆದ್ದು ಹುಳಿಹೆಂಡವಾದೀತು ತಾನೇ?!
ಹೊಸ ಜೇನ ತುಂಬಲು ಹಳೆ ಮನವೇ ಬೇಕು.
ಸವಿನೆನಪುಗಳು ನೀಡುವ ಕಹಿ ಭಾವಗಳ ಮರೆಯಲು
ಹೊಸ ನೆನಪುಗಳಿಗಿಂದೇ ಬದುಕು ಹುಟ್ಟು ಹಾಕಬೇಕು.
16 ಕಾಮೆಂಟ್‌ಗಳು:
ಸುಂದರವಾದ ಕವನ,
ಮೊದಲ ಓದಿಗೆ ತುಂಬಾ ಸರಳವೆನಿಸಿದರೂ, ಅನೇಕ ಒಳ ಅರ್ಥಗಳನ್ನು ಹೊಂದಿದೆ.
ಪದಗಳ ಜೋಡಣೆ, ಸೂಕ್ತ ಬಳಕೆ ಮತ್ತು ಅರ್ಥ ಖುಶಿ ಕೊಡ್ತು.
ಬಹಳ ದಿನದ ನಂತರ ನಿಮ್ಮ ಬ್ಲಾಗಲ್ಲಿ ಒಳ್ಳೆ ಕವನ ಓದಿ ಖುಶಿಯಾಯ್ತು.
ಪ್ರಿಯ ತೇಜೂ,
ಹುಣ್ಣಿಮೆಯ ಚಂದ್ರನಂತಾಗಿದೆ ನಿನ್ನ ಬ್ಲಾಗ್ ! ತಿಂಗಳಿಗೊಮ್ಮೆ ಬಂದರೂ ಮಸೆಳೆಯುವ ಮುದಗೊಳಿಸುವ ಚಂದ್ರನಂತೆ !
ವಿಷಾದದ ನಡುವೆ ಚೇತರಿಕೆಯ, ಭರವಸೆಯ ಭಾವ !
ಮಂಥನ ತುಂಬಾ ಚೆನ್ನಾಗಿದೆ ಸಾಗಿದೆ.. ಮನಸ್ಸನ್ನು ಧರೆಗೆ ಹೋಲಿಸಿ ಹಲವು ಅರ್ಥಗಳನ್ನು ನೀಡಿದ್ದೀರಿ.
ಹೊಸ ಜೇನ ತುಂಬಲು ಹಳೆ ಮನವೇ ಬೇಕು-ಇದು ನಿಜವಾಗಿಯು ಒಪ್ಪುವಂತ ಮಾತು
>> ಹೊಸ ಜೇನ ತುಂಬಲು ಹಳೆ ಮನವೇ ಬೇಕು
ಚನಾಗಿದ್ದು ಡುಮ್ಮಕ್ಕಾ..
last paragraph is very touchy :)
ಮೇಡಂ, ಮಂಥನ ನಿಜಕ್ಕೂ ಮಂಥಿಸಿ ಕಡೆದಂತಹ ಕವನ.
ಚಂದ್ರಶೇಖರ ಬಿ.ಎಚ್.
ತೇಜಸ್ವಿನಿಯವರೇ ಸಮುದ್ರ ಶಾಂತವಾಗಿದ್ದು ಒಮ್ಮೆಗೇ ಭೋರ್ಗರೆಯುದು ತಿಳಿಯಿತು ಅದನ್ನು ನಿಮ್ಮ ದೀರ್ಘ ಶಾಂತತೆ ಮತ್ತು ಒಮ್ಮೆಗೇ ಉತ್ತಮ ಮಂಥಿತ ಭಾವ ಸಾದೃಶ್ಯಕ್ಕೆ ಹೋಲಿಸಿಕೊಂಡಿರೋ ಹೇಗೆ? ಶರಧಿ ಧರೆಯೊಳು ಎನ್ನುವ ಮೂಲಕ ಅಗಾಧವಾದರೂ ಶರಧಿ ಇರುವುದು ಧರೆಯಮೇಲೇಯೇ ..ಧರೆ ಕೇವಲ ಶೇ ೩೦ ರಷ್ಟಿದ್ದರೂ (ಗೋಚರ) ಅಗಾಧ ಶರಧಿಯನ್ನು ಹೊತ್ತಿದೆ ಎನ್ನುವ ಮೂಲಕ ಅತಿ ಗಾಢ ವಿಷಯಗಳನ್ನು ಸೂಚ್ಯವಾಗಿ ಕವನಿಸಿದ್ದೀರಿ....ಅಭಿನಂದನೆಗಳು.
ತುಂಬ ಔಚಿತ್ಯಪೂರ್ಣ ರೂಪಕಗಳನ್ನು ಬಳಸಿದ ಕವನ. ಮನಸ್ಸು ಧರೆಯಾದರೆ, ಶರಧಿ ನೆನಪುಗಳು.
ತೇಜಸ್ವಿನಿ, ಹುಣ್ಣಿಮೆಯ ಚಂದ್ರನಂತೆ ಶುಭಕರವಾದ ನೆನಪುಗಳೇ ನಿನ್ನ ಮನಸ್ಸನ್ನು ಉಕ್ಕೇರಿಸಲಿ ಹಾಗೂ ಕಾವ್ಯರೂಪವಾಗಿ ಹೊಮ್ಮಲಿ ಎಂದು ಹಾರೈಸುತ್ತೇನೆ.
hi, u can buy 'illada theeradalli'
in sapna, navakarnataka or in ankitha bookshop.
thank u.
ನಿಮ್ಮ ಕವನದ ಸಾಲುಗಳು ನಮ್ಮ ಮನವನು ಯಾವುದಾವುದೋ ಹಳೆಯ ನೆನಪುಗಳ ಗೂಡಿಗೆ ಒಯ್ಯನೆ ಎಳೆದೊಯಿತು.ಸಹಯಾತ್ರಿ.
ತೇಜಸ್ವಿನಿ ಮೇಡಂ,
ಜೇನು ಸವಿಯಾದರೇನಂತೆ, ಬಿಸಿ ಶಾಖಕ್ಕೆ ಒಡ್ಡುತಿರೆ,
ಬುರುಗೆದ್ದು ಹುಳಿಹೆಂಡವಾದೀತು ತಾನೇ?!
ಹೊಸ ಜೇನ ತುಂಬಲು ಹಳೆ ಮನವೇ ಬೇಕು
ಸಾಲುಗಳು ತುಂಬಾ ಇಷ್ಟವಾಯಿತು
ತೇಜಸ್ವಿನಿ
ನಾನೂ ಸಹ ಅನೇಕ ದಿನಗಳಿಮ್ದ ಬ್ಲಾಗ್ ಪ್ರಪಂಚದಿಂದ ಮರೆಯಾಗಿದ್ದೆ.
ನಿಮ್ಮ ಈ ಕವನದ ತುಂಬಾ ವಿಷಾದವೇ ತುಂಬಿದೆ.ಭಾವನೆಗಳು ದಟ್ಟವಾಗಿವೆ.
tejakka... bahala dinagala nanthara nimma kavanavannu oduththiddare kushi aagtha ide...nimma kavanadalli anubhavagaLinda maagiruva manasondu ide...
ಮೆಚ್ಚಿ ಪ್ರೋತ್ಸಾಹಿಸಿದ ಎಲ್ಲಾ ಸಹಮಾನಸಿಗರಿಗೂ ತುಂಬಾ ಧನ್ಯವಾದಗಳು. ಪ್ರೋತ್ಸಾಹಭರಿತ ಪ್ರತಿಕ್ರಿಯೆಗಳೇ ಕವನಗಳ ಹುಟ್ಟಿಗೆ ಸ್ಫೂರ್ತಿ :)
ಅಕ್ಕಯ್ಯ ಇಷ್ಟ ಆತು...
-ಧರಿತ್ರಿ
ತೇಜು ಅಕ್ಕ,
ಇಂದು ಸಮಯ ಸಿಕ್ಕಿತು ಓದೋಕೆ..
ಮನಸಿನ ಮಂಥನ ತುಂಬ ಅರ್ಥದಿಂದ ಕೂಡಿದೆ.
ಕಾಮೆಂಟ್ ಪೋಸ್ಟ್ ಮಾಡಿ