ಭಾನುವಾರ, ಸೆಪ್ಟೆಂಬರ್ 7, 2008

ಸ್ವಗತ

ಯಾರು ಸಾಟಿ ಎನಗೆ?!

ಹೊರಗಿನ ಬೆಳಕಿನೊಡನೆ
ಒಳಗಿನ ಬೆಳಕಿನಾಟ
ಒಳಗೆ ಹೊರಗೆಲ್ಲಾ
ಬೆಡಗು-ಬೆಳಕಿನ ಚೆಲ್ಲಾಟ
ಜೊತೆಗೆ ಸೇರಿದೆ ನನ್ನ ತುಂಟಾಟ.

ತುಂಬಿ ಹೊರ ಚೆಲ್ಲಲ್ಲು
ಅಣಿಯಾಗಿ ನಿಂತಿಹ
ನನ್ನ ನಗೆ ಬುಗ್ಗೆಗಳು,
ಒಳಗಿಂದ ಹೊರಬರಲು
ಹೊರ ಬೆಳಕೇ ಮಬ್ಬು-ಮಂಕು,
ಒಳಗೆಲ್ಲಾ ತಂಪು-ಸೊಂಪು.

ಬಿಳಿ ಮೋಡಗಳೊಳಗಿಂದ
ಕರಿ ಚಂದ್ರರು ಇಣುಕುತಿಹರೋ,
ಕಪ್ಪು ಗೋಲಿಗಳೊಳಗಿಂದ
ಚುಕ್ಕಿ ತಾರೆಗಳು ಮಿನುಗುತಿಹವೋ!!
ರವಿಯೇ ಕಣ್ಣ ಬಿಂಬವಾಗಿ
ಎಳೆಯ ಕಿರಣ ಬೀರುತಿಹನೋ!!

ನನ್ನೊಳಗೆ ಆತ್ಮತೇಜ,
ನಿನ್ನೊಳಗೆ ಕ್ಷಣದ ಬೆಳಕು
ನನ್ನ ಜೊತೆ ಪೈಪೋಟಿಯೇ?!
ನಿನ್ನ ಬದುಕು ನನ್ನ ಕೈಲಿ
ನೀನು ಎನಗೆ ಸಾಟಿಯೇ?!

ಒಂದೇ ಕ್ಷಣ ಸಾಕು ನನಗೆ,
ನಿನ್ನ ಕೆಡವಿ ಹಾಕಲು,
ನೂಕಿ ನಿನ್ನ ಒಡೆಯಲು,
ಮೆಟ್ಟಿ ಕುಣಿದಾಡಲು,
ಬಿಡೆನು ನಿನ್ನ ಬೆಳಗಲು.

- ಅದಿತಿ ತೇಜಸ್ವಿನಿ ಹೆಗಡೆ :)
(ಫೋಟೋ ಮೇಲೆ ಕ್ಲಿಕ್ಕಿಸಿದರೆ ಚಿತ್ರ ದೊಡ್ಡದಾಗಿ ಕಾಣುವುದು)

37 ಕಾಮೆಂಟ್‌ಗಳು:

Unknown ಹೇಳಿದರು...

ಅದ್ಭುತ.....ತುಂಬಾ ಚೆನ್ನಾಗಿದೆ.
ಅದಿತಿಯ ತುಂಟ ಕ್ಷಣಗಳನ್ನು ಅಕ್ಷರಗಳಲ್ಲಿ ಹಿಡಿದಿದ್ದು ಬಹಳ ಇಷ್ಟವಾಯ್ತು.
ಅವಳ ಕಣ್ಣುಗಳ ಹೊಳಪಿನ ಮುಂದೆ ಕೃತಕ ಬೆಳಕೂ ಮಬ್ಬಾಗಿದೆ.

ಅಂತರ್ವಾಣಿ ಹೇಳಿದರು...

ಬಿಳಿ ಮೋಡಗಳೊಳಗಿಂದ
ಕರಿ ಚಂದ್ರರು ಇಣುಕುತಿಹರೋ,
ಕಪ್ಪು ಗೋಲಿಗಳೊಳಗಿಂದ
ಚುಕ್ಕಿ ತಾರೆಗಳು ಮಿನುಗುತಿಹವೋ!!
ರವಿಯೇ ಕಣ್ಣ ಬಿಂಬವಾಗಿ
ಎಳೆಯ ಕಿರಣ ಬೀರುತಿಹನೋ!!

----
ಅದಿತಿ ತುಂಬಾ ಚೆನ್ನಾಗಿ ಬರೆದಿದ್ದಾಳೆ.
ಅವಳ ಭಾವನೆಗಳು ಇನ್ನು ಏನೋ ಇದೆ..

ಬೆಳೆದ ಮೇಲೆ, ಅವಳೂ ಸಹ ಹೀಗೆ ಬರೆಯಲ್ಲಿ ಎಂದು ಒಂದು ಮುತ್ತು ಕೊಟ್ಟು ಹಾರೈಸ್ತೀನಿ.

sunaath ಹೇಳಿದರು...

ಎಂಥಾ ಬೆರಗಿನಿಂದ, ಆತ್ಮಸ್ಥೈರ್ಯದಿಂದ ನೋಡುತ್ತಿರುವ ಮುದ್ದು ಮುಖ! ಅಷ್ಟೇ ಸೊಗಸಾದ ಕವನ.

ಕುಕೂಊ.. ಹೇಳಿದರು...

ಹಬ್ಬಾ ಏನು ಕಣ್ಣುಗಳು ಅವು? ಊದುಗಲ್ಲ,ಅರಳಿದ ಕಣ್ಣುಗಳ ಜೊತೆಗೆ ಹಣೆಯಲ್ಲಿ ಹಚ್ಚಿದ ಕಪ್ಪುಕಾಡಿಗೆ ಒಂದು ಹೊತ್ತು ನನ್ನನ್ನು ಮರೆಸಿತು. ತುಂಬಾ ಮುದ್ದಾದ ಅದಿತಿ ಮುಕ. ಅದಕ್ಕೆ ಸರಿಯಾದ ಕಗ್ಗ. ಅವಳದಲ್ಲದ ಅವಳ ಈ ಕವಿತೆ ಮುಂದೆ ಅವಳದಾಗಿ ಮೂಡಲಿ ಎಂಬ ನಲಿವಾರೈಗೆಗಳು.

ಸ್ವಾಮಿ
ಪುಣೆ

kanasu ಹೇಳಿದರು...

ಸೊಗಸಾದ ಕವನ...ಹೊಳಪಿನ ಕಣ್ಣಿನ ಮಗು ಸಹ..

ತುಂಬ ಮುದ್ದಾಗಿದೆ ಮಗು ;) ಅದಿತಿ ಅವಳ ಹೆಸರೇ?

Sushrutha Dodderi ಹೇಳಿದರು...

ಅದಿತಿ ಸಖ್ಖತ್!

ಆಲಾಪಿನಿ ಹೇಳಿದರು...

ಸೂಪರ್‍ ಅದಿತಿ. ಅಮ್ಮ ನಿನ್ನನ್ನ ಈಗ್ಲೇ ಕವಿ ಮಾಡಿಬಿಟ್ಟಿದಾಳೆ. ಎಂಥ ಚೆಂದ ಕಾಣ್ತಿದಿಯೇ ಗಲ್ಲ ಉಬ್ಬಿಸ್ಕೊಂಡು?

ಅದಿತಿ ಅಮ್ಮ... ಮಗುವಿನಷ್ಟೇ ಕವಿತೆಯ ಆಶಯ ಪ್ರಜ್ವಲಿಸುತ್ತಿದೆ.

ಹೀಗೆ ಬರೆಯುತ್ತಿರಿ. ನಾವು ಓದಲು ಕಾಯುತ್ತಿದ್ದೇವೆ

ಶ್ಯಾಮಾ ಹೇಳಿದರು...

ಮುದ್ದು ಪುಟಾಣಿ ಅದಿತಿಯಷ್ಟೆ ಮುದ್ದಾಗಿದ್ದು ಕವನ :)

bhadra ಹೇಳಿದರು...

ತೇಜಸ್ಸನ್ನು ತುಂಬಿಕೊಂಡಿರುವ ಅದಿತಿ, ಬೆರಗುಗಣ್ಣಿನಿಂದ ಹೀಗೆ ಹೇಳ್ತಿದ್ದಾಳಂತೆ -

ಇದೆಂತಹ ದೀಪ
ತಾಪವಿಲ್ಲದ ದೀಪ
ತೇಜೋಮಯವಾದ ದೀಪ
ಕೈ ಹಾಕಲು ತಣ್ಣಗಿರುವ ಪಾಪ

ಅಮ್ಮ ಹೇಳ್ತಾಳೆ! ಸೂರ್ಯ ಬೆಳಕು, ಶಕ್ತಿ, ಶಾಖ, ತೇಜಸ್ಸಿನ ಅಧಿದೇವತೆ, ಅವನನ್ನು ಒಲಿಸಿಕೊಂಡರೆ, ಈ ಜಗತ್ತಿನ ಏಳಿಗೆ ಖಚಿತ ಅಂತ. ಆದರೆ ಈ ದೀಪ ತಣ್ಣಗಿನ ಬೆಳಕಿನಿಂದ ತುಂಬಿದೆ, ತೇಜಸ್ಸು ಹೊಂದಿದೆ, ಶಕ್ತಿ (!). ಆದರೆ ಅಮ್ಮ ಹೇಳಿದ ಸೂರ್ಯನಿಗಿಂತ ಹೆಚ್ಚಿನದ್ದಾ ಈ ದೀಪ. ಅಯ್ಯೋ ಪಾಪ! ದೀಪ ಆರಿಯೇ ಹೋಯ್ತು - ಅಮ್ಮ ಹೇಳ್ತಾಳೆ ಕರೆಂಟ್ ಹೋಯ್ತು ಅಂತ. ಈ ಕರೆಂಟ್ ಅಂದ್ರೇನು, ಯಾರು ಈ ದೀಪಕ್ಕೆ ಕೊಡ್ತಾರೆ. [:)].

ಹೀಗೆಯೇ ಯೋಚಿಸ್ತಾ - ಜ್ಞಾನ ತುಂಬಿಕೊಳ್ತಾ ಇರು ಪುಟ್ಟಿ. ಅಕ್ಷರಾಭ್ಯಾಸದ ದಿನವೇ ಸೂಪರ್ ಲೇಖನ / ಕವನವನ್ನು ಈ ಜಗತ್ತಿಗೆ ಕೊಡು.

ಸೂಪತ್ ಪುಟ್ಟಿ ಅಂದ್ರೆ ಅದಿತಿ (ಸೂರ್ಯನ ಪುಟ್ಟಿ ಅಲ್ವಾ!)

ಗುರುದೇವ ದಯಾ ಕರೊ ದೀನ ಜನೆ

ವಿ.ರಾ.ಹೆ. ಹೇಳಿದರು...

:-)

ಪುಟ್ಟಿಗೆ ದೃಷ್ಟಿ ಬೊಟ್ಟು ಇಟ್ಟಿದ್ದೆ ಅಲ್ದಾ ?

ಹಾಂಗೆ ಕವನಕ್ಕೂ ಇಡಕ್ಕಾಗ್ತೆನ!

ಹರೀಶ ಮಾಂಬಾಡಿ ಹೇಳಿದರು...

ಹೊರ ಬೆಳಕೇ ಮಬ್ಬು-ಮಂಕು,
ಒಳಗೆಲ್ಲಾ ತಂಪು-ಸೊಂಪು.

ಬಿಳಿ ಮೋಡಗಳೊಳಗಿಂದ
ಕರಿ ಚಂದ್ರರು ಇಣುಕುತಿಹರೋ
ಯಾಕೋ ಇಸ್ಟ ಆಯಿತು...

PRANJALE ಹೇಳಿದರು...

chennagi bardiddira

VENU VINOD ಹೇಳಿದರು...

ಸುಂದರ ಭಾವಚಿತ್ರ, ಅದಕ್ಕೆ ಒಪ್ಪುವ ಸಾಲುಗಳು. ಫೋಟೋ ಚೋ ಚ್ವೀಟ್ :)

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ತೇಜು...
ಚಂದ ಕವಿತೆ, ಅದಿತಿ ಪುಟ್ಟಿಯ ಹಾಗೆ.
ಫೋಟೋಗೆ ತಕ್ಕ ಕವಿತೆ, ಕವಿತೆಗೆ ತಕ್ಕ ಫೋಟೋ.
ನೋಡಿ, ಓದಿ ಮನದುಂಬಿ ಬಂತು. ಅದಿತಿಗೊಂದು ಮುತ್ತು.

ಸಿಮ್ಮಾ ಹೇಳಿದರು...

ಫೋಟೋ ಸಖತ್ತಾಗಿದೆರೀ. ಆ ಕಣ್ಣ ಬೆಳಕ ಮುಂದೆ ಲೈಟ್ ಬೆಳಕು ಊಹೂಂ... ಏನೇನೂ ಅಲ್ಲ!

ತೇಜಸ್ವಿನಿ ಹೆಗಡೆ ಹೇಳಿದರು...

@ಮಧು,

ತುಂಬಾ ಧನ್ಯವಾದ :)

@ಶಂಕರ್,

ಹೌದು ಮಕ್ಕಳ ಭಾವನೆಗಳನ್ನು ನಾವು ಸಂಪೂರ್ಣ ಅರಿಯಲು ಸಾಧ್ಯವಿಲ್ಲ. ಆದರೆ ಕಲ್ಪಿಸಬಹುದಷ್ಟೇ?! ಧನ್ಯವಾದಗಳು.

ಸು@ನಾಥ ಕಾಕಾ ಹಾಗೂ ಕಡಕೊಳ್ಳ ಅವರೆ,

ಮೆಚ್ಚುಗೆಗಳಿಗೆ ನಾನು ಹಾಗೂ ನನ್ನ ಪುಟ್ಟಿ ಆಭಾರಿ.. ಧನ್ಯವಾದಗಳು.

@ಕನಸು,

ಹೌದು ಅವಳ ಹೆಸರು ‘ಅದಿತಿ’ :) ಧನ್ಯವಾದಗಳು.

@ಸುಶ್ರುತ,

ಹೂಂ ಅದು ಸಖ್ಖತ್.. ಆದ್ರೆ ಕವನ?! :)

@ಶ್ರೀದೇವಿ ಹಾಗೂ ಶ್ಯಾಮಾ,

ತುಂಬಾ ತುಂಬಾ ಧನ್ಯವಾದಗಳು... ಪುಟ್ಟಿಯಿಂದ ಕೂಡಾ :)

@ಶ್ರೀನಿವಾಸ್ ಅವರೆ,

ಸುಂದರ ಚುಟುಕು. ಅದಿತಿ ಅಂದರೆ ಸೂರ್ಯನ ಪುಟ್ಟಿಯೋ ಅಲ್ಲವೋ ತಿಳಿಯದು ತೇಜು ಪುಟ್ಟಿಯಂತೂ ಹೌದು :) ಅದಿತಿ ಎಂದರೆ ದೇವಮಾತಾ (ದೇವತೆಗಳಿಗೆಲ್ಲಾ ತಾಯಿ).. ಮೊದಲ ತಾಯಿ ಎಂದರ್ಥ ಎಂದು ಓದಿರುವೆ ಕೇಳಿರುವೆ. ಮೆಚ್ಚುಗೆಗಳಿಗೆ ತುಂಬಾ ಧನ್ಯವಾದಗಳು.

@ವಿಕಾಸ್,

ಕವನಕ್ಕೆ ದೃಷ್ಟಿಯಾಗ್ತೇ ಇಲ್ಲೇ ಪಕ್ಕದಲ್ಲೇ ಪುಟ್ಟಿ ಇದ್ದಲಿ :) ಪುಟ್ಟಿಗೆ ದೃಷ್ಟಿ ಅಪ್ಪುಲೆ ಕವನ ಬಿಡ್ತಿಲ್ಲೆ ಬಿಡು :) ಧನ್ಯವಾದ.

@ಮಾಂಬಾಡಿ, ಪ್ರಾಂಜಲೆ ಹಾಗೂ ವೇಣು ಅವರೆ,

ಮಚ್ಚುಗೆಗಳಿಗೆ ಹಾಗೂ ಪ್ರೋತ್ಸಾಹಭರಿತ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.

@ಶಾಂತಲಾ,

ನಿನ್ನೀ ಪ್ರೀತಿನ ಹಾಗೇ ಮುತ್ತನ್ನ ಅದಿತಿಗೆ ಮುಟ್ಟಿಸಿದ್ದಿ :)

@ಸಿಮ್ಮಾ,

ಹೌದಲ್ವಾ?.. ತುಂಬಾ ಧನ್ಯವಾದಗಳು :)

ಭಾರ್ಗವಿ ಹೇಳಿದರು...

ತೇಜಸ್ವಿನಿ ಯವರೇ
ಚೆಂದದ ಕವನ ,ಮುದ್ದಾದ ಹೆಸರಿನ ಮುದ್ದಾದ ಮಗು. ಆದಿತಿಯ ಕಣ್ಣ ಹೊಳಪಿಗೆ ಸಾಟಿ ಯಾರು?

ತೇಜಸ್ವಿನಿ ಹೆಗಡೆ ಹೇಳಿದರು...

@ SAATI YAARU

ಧನ್ಯವಾದಗಳು :)

ಶ್ರೀನಿಧಿ.ಡಿ.ಎಸ್ ಹೇಳಿದರು...

aahaa!lovely!

ranjith ಹೇಳಿದರು...

ಸುಂದರ ಕವನ...
ಆ ಮಗೂಗೆ ನನ್ನ ಮುದ್ದು ತಲುಪಿಸಿ..:)
-ರಂಜಿತ್

ಚಿತ್ರಾ ಹೇಳಿದರು...

ಅದಿತಿ ಪುಟ್ಟೀ,

ಎಷ್ಟು ಚಂದ ಬರದ್ಯೇ ಚಿನ್ನೂ .ನಿನ್ನಷ್ಟೇ ಚಂದ ನಿನ್ನ ಕವನ.

"ನನ್ನೊಳಗೆ ಆತ್ಮತೇಜ,
ನಿನ್ನೊಳಗೆ ಕ್ಷಣದ ಬೆಳಕು
ನನ್ನ ಜೊತೆ ಪೈಪೋಟಿಯೇ?!
ನಿನ್ನ ಬದುಕು ನನ್ನ ಕೈಲಿ
ನೀನು ಎನಗೆ ಸಾಟಿಯೇ?! "

ಅದು ವಿದ್ಯುದ್ದೀಪ ಅದರೇನು?ನಿನ್ನ ಕಣ್ಣ ಹೊಳಪಿನ ಮುಂದೆ ಬರೀ ಮಂಕು ದೀಪ ಅಷ್ಟೇ.

"ಒಂದೇ ಕ್ಷಣ ಸಾಕು ನನಗೆ,
ನಿನ್ನ ಕೆಡವಿ ಹಾಕಲು,
ನೂಕಿ ನಿನ್ನ ಒಡೆಯಲು,
ಮೆಟ್ಟಿ ಕುಣಿದಾಡಲು,
ಬಿಡೆನು ನಿನ್ನ ಬೆಳಗಲು."

ಅಲ್ಲದಾ ಮತ್ತೆ?

ನಿನ್ನ ಫೋಟೊ ನೋಡಿ ನಮ್ಮನೆ ಪುಟ್ಟಿದೂ ಹೀಂಗೇ ಕೆನ್ನೆ ಉಬ್ಬಿಸಿ ನಿಂತ ಫೋಟೊ ನೆನಪಾತು. ಹೀಂಗೇ ನಿನ್ನ ಸಾಹಸನೆಲ್ಲ ಬರೀತಾ ಇರು !

ತೇಜಸ್ವಿನಿ ಹೆಗಡೆ ಹೇಳಿದರು...

@ಶ್ರೀನಿಧಿ,
Thank You :)

@ರಂಜಿತ್,

ನಿಮ್ಮ ಮುದ್ದನ್ನು ಆಕೆಗೆ ತಲುಪಿಸಿರುವೆ :) ತುಂಬಾ ಧನ್ಯವಾದಗಳು.

@ಚಿತ್ರಾ,

ನಿನ್ನ ಪುಟ್ಟಿಯ ಫೋಟೋ ಕೂಡಾ ಬ್ಲಾಗ್‌ನಲ್ಲಿ ಹಾಕಬೇಕಾಗಿ ವಿನಂತಿ.. ನನ್ನ ಪುಟ್ಟಿಗೆ ತೋರ್ಸಿದ್ರೆ ರಾಶಿ ಖುಶಿ ಪಡ್ತು :) ಪುಟ್ಟಿ ಹೆಸರೆಂತು? ಅದ್ರ ಸಾಹಸಗಳನ್ನೂ ಬರೀ ಓದಿ ನಾ ಖುಶಿ ಪಡ್ತಿ..:) ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.

ಚಿತ್ರಾ ಹೇಳಿದರು...

ತೇಜಸ್ವಿನಿ..

ನನ್ನ ಪುಟ್ಟಿ ಈಗ ದೊಡ್ಡ ಆಯ್ದು.:-) ಹೆಸರು " ಸಿರಿ"
ಇನ್ಯಾವಾಗಾದರೂ ಹಾಕ್ತಿ ಫೋಟೋನ. ನಿಮ್ಮನೆ ಪುಟ್ಟಿಗೆ ತೋರಿಸಲಕ್ಕಡ. ಥ್ಯಾಂಕ್ಸ್.

ತೇಜಸ್ವಿನಿ ಹೆಗಡೆ ಹೇಳಿದರು...

@ಚಿತ್ರಾ,

" ಸಿರಿ" - Cute name :)Thank You.

ಸುಧೇಶ್ ಶೆಟ್ಟಿ ಹೇಳಿದರು...

vow!
Super!
deepa sundari muddaagiddaale:) kavana kooda.

ಯಜ್ಞೇಶ್ (yajnesh) ಹೇಳಿದರು...

ಕವನ ಮತ್ತು ಪುಟ್ಟಿ ಎರಡೂ ಚೆನ್ನಾಗಿದ್ದು

ತೇಜಸ್ವಿನಿ ಹೆಗಡೆ ಹೇಳಿದರು...

@ಸುಧೇಶ್ ಹಾಗೂ ಯಜ್ಞೇಶ್ ಅವರೆ,

ಕವನವನ್ನು ಹಾಗೂ ಕವನದ ರಚನೆ ಸ್ಪೂರ್ತಿಯಾದ ಪುಟ್ಟಿಯನ್ನೂ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು.

Chevar ಹೇಳಿದರು...

ಸುಂದರ ಕವಿತೆ. ಇಷ್ಟವಾಯಿತು.

ಪೂರ್ಣಿಮಾ ಭಟ್ಟ, ಸಣ್ಣಕೇರಿ ಹೇಳಿದರು...

Teju,
Chendada kavite, chandada photo, mattoo chendada putti :)

shivu.k ಹೇಳಿದರು...

ಒಳ-ಹೊರ ಬೆಳಕಿನ ಕಲ್ಪನೆ ತುಂಬಾ ಚೆನ್ನಾಗಿದೆ.
ಎಲ್ಲಾ ಓಕೆ. ಕೊನೆಯಲ್ಲಿ ಕೆಡವಿ ಹಾಕಿ ಒಡೆಯುವ ಬಯಕೆ ಯಾಕೆ?.

ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com

ಶಿವು.ಕೆ

ತೇಜಸ್ವಿನಿ ಹೆಗಡೆ ಹೇಳಿದರು...

ಶಿವು ಅವರೆ,

ನಿಮ್ಮ ಬ್ಲಾಗ್ ತುಂಬಾ ವೈವಿಧ್ಯಮಯ ಹಾಗೂ ವರ್ಣರಂಜಿತವಾಗಿದೆ. ಪರಿಚಯಿಸಿದ್ದಕ್ಕೆ ಧನ್ಯವಾದಗಳು.

ಇದು ಪುಟ್ಟಿಯ ಸ್ವಗತ. ಅವಳ ತುಡಿತ, ಕುತೂಹಲವಿದ್ದುದು ಆ ಕೃತಕ ದೀಪವನ್ನಾರಿಸುವುದರಲ್ಲಿಯೇ. ಅವಳ ಆ ಭಾವವನ್ನೇ ನೈಜವಾಗಿ ಚಿತ್ರದಲ್ಲೂ ಹಾಗೂ ಚಿತ್ರಣದಲ್ಲೂ ಕಾಣಿಸಲು ಯತ್ನಿಸಿದ್ದೇನೆ ಅಷ್ಟೇ.

ಮೆಚ್ಚುಗೆಗೆ ಧನ್ಯವಾದಗಳು. ಬರುತ್ತಿರಿ.

shivu.k ಹೇಳಿದರು...

ನನಗೆ ನಿಮ್ಮ ಪುಟ್ಟಿಯಷ್ಟೆ ಭಾವನೆಗಳನ್ನು ನನ್ನ ಛಾಯಾಗ್ರಫಿಯ ಮನಸ್ಸು ಆ ದೀಪವು ಬೆಳಕಿನಲ್ಲಿ ಹೊಮ್ಮಿಸಿದೆಯೆಂದು ನನಗನ್ನಿಸಿದ್ದರಿಂದ ಹಾಗೆ ಪ್ರತಿಕ್ರಿಯಿಸಿದೆ. Thanks.
ಮತ್ತೊಂದು ವಿಷಯ ನೀವು ನನ್ನ ಮತ್ತೊಂದು ಬ್ಲಾಗಿಗೆ ಬಂದರೆ ಅಲ್ಲಿ ನಿಮಗೆ ಮತ್ತಷ್ಟು ಕುತೂಹಲಬರಿತ ಲೇಖನಗಳು ಸಿಗಬಹುದು. ಓದಿ enjoy ಮಾಡ್ತೀರ ಅನ್ನಿಸುತ್ತೆ.
ಮತ್ತೊಂದು ಬ್ಲಾಗ್ ವಿಳಾಸ:
http://camerahindhe.blogspot.com/
ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಬ್ಲಾಗಿನಲ್ಲಿ ಬರೆಯಿರಿ

ತೇಜಸ್ವಿನಿ ಹೆಗಡೆ ಹೇಳಿದರು...

ಖಂಡಿತ ನೋಡುವೆ. ಧನ್ಯವಾದಗಳು ಪ್ರತಿಕ್ರಿಯೆಗೆ.

ಚಿತ್ರಾ ಸಂತೋಷ್ ಹೇಳಿದರು...

ಪುಟ್ಟಿಯಷ್ಟೇ ಕವನನೂ ಚೆನ್ನಾಗಿದೆ..(:)
-ಚಿತ್ರಾ

Archu ಹೇಳಿದರು...

wow..wow..ashte nanna commentu :)

ಚಂದ್ರಕಾಂತ ಎಸ್ ಹೇಳಿದರು...

ಅದಿತಿ ಪುಟ್ಟಾ

ನಿನ್ನ ಅಮ್ಮನಿಗೆ ನಿನ್ನ ಫೋಟೋ ಹಾಕಲು ಹೇಳಬೇಕೆಂದಿದ್ದೆ. ಅಷ್ಟರಲ್ಲಿ ನೀನೇ ಕಾಣಿಸಿದೆ.ನಿನ್ನನ್ನು ನೋಡಲು ತಡವಾಗಿ ಬಂದಿರುವೆ. ಸಾರಿ ಪುಟ್ಟಾ..

ತೇಜಸ್ವಿನಿ
ಅದಿತಿ ಬಲು ಮುದ್ದಾಗಿದ್ದಾಳೆ. ಕಣ್ಣುಗಳೋ.. ದೃಷ್ಟಿಯಾಗದಿರಲಿ.

ಅದಿತಿ ಕಶ್ಯಪ ಮಹರ್ಷಿಯ ಹೆಂಡತಿ ಹಾಗು ದ್ವಾದಶಾದಿತ್ಯರ ತಾಯಿ ಮತ್ತು ದೇವತೆಗಳ ತಾಯಿ.

ಅದಿತಿಗೊಂದು ಮುತ್ತು

ಶಿವಪ್ರಕಾಶ್ ಹೇಳಿದರು...

its for you aditi....

hey aditi haste haste haste haste haste haste haste
jo jara nahi to thoda thoda thoda thoda thoda muskura