ಮುಚ್ಚಿರುವ ಎವೆಗಳ ಹಿಂದೆ
ಗತದಿನಗಳದ್ದೇ ಸಿಹಿ-ಕಹಿ ನೆನಪು
ಸಿಗದ ಸಂತಸದ ಕ್ಷಣಗಳ ಮೆಲುಕು,
ಮುಪ್ಪಲ್ಲೂ ಕಾಡುವುದು ಸವಿಗನಸು
ಸುಕ್ಕುಗಟ್ಟಿದ ಚರ್ಮ, ದೇಹಕ್ಕಂಟಿಹುದು
ವಯಸಿನ ಲೆಕ್ಕಾಚಾರ ಒಮ್ಮೊಮ್ಮೆ
ಈ ಮನಸಿಗಂತೂ ಸಿಗದು..
ನೆರೆತ ಕೂದಲುಗಳ ಸಿಕ್ಕು
ಬಿಡಿಸುವಾಗೆಲ್ಲಾ ಮಬ್ಬು ಮಬ್ಬು
ಕೊರಳೊಳಗಿನ ಒಂಟಿ ಸರದೊಳು
ಹುಡುಕುತಿವೆ ಕಪ್ಪು ಮಣಿಗಳನೇ
ಅದುರುವ ಕೈಬೆರಳುಗಳು.
ಹಿಂತಿರುಗಿದಷ್ಟೂ ಭೂತಗಳದೇ ಕಾಟ
ಭವಿತವ್ಯದ ಕೊನೆಹೆಜ್ಜೆಯತ್ತ
ಸಾಗುತಿದೆ ಇಳಿಸಂಜೆಯ ಈ ಪಯಣ...
ಇಂದು ಮಾತ್ರ ಒಳ ಹೊರಗೆಲ್ಲಾ,
ತುಂಬಿಹುದು ಬರೀ ಶೂನ್ಯ.
--ತೇಜಸ್ವಿನಿ ಹೆಗಡೆ.
ನಿಮ್ಮ ಇತ್ತೀಚಿನ ಕವನಗಳು ತುಂಬಾ ಚೆನ್ನಾಗಿವೆ....
ಪ್ರತ್ಯುತ್ತರಅಳಿಸುತುಂಬಾ ಚೆನ್ನಾಗಿದೆ ಕವನ... ಬದುಕೇ ಹಾಗೆ ಕನವರಿಸಲೇ ಬೇಕಾಗುತ್ತೆ...
ಪ್ರತ್ಯುತ್ತರಅಳಿಸುchandiddu :)
ಪ್ರತ್ಯುತ್ತರಅಳಿಸುಚೆನ್ನಾಗಿದೆ ಕವನ ತೇಜಸ್ವಿನಿ.
ಪ್ರತ್ಯುತ್ತರಅಳಿಸುchennagide kavana....
ಪ್ರತ್ಯುತ್ತರಅಳಿಸುಸರಳ ಭಾವದಲ್ಲಿ ವ್ಯಕ್ತಪಡಿಸಿದ್ದು ಚೆನ್ನಾಗಿದೆ, ಕವನದ ಮಟ್ಟಿಗೆ. ಬದುಕಿಗೆ ಈ ನಿರಾಸೆ ಸಲ್ಲ !
ಪ್ರತ್ಯುತ್ತರಅಳಿಸುWonderful poem!
ಪ್ರತ್ಯುತ್ತರಅಳಿಸುದಿನೇಶ್ ಅವರೆ,
ಪ್ರತ್ಯುತ್ತರಅಳಿಸುತುಂಬಾ ಧನ್ಯವಾದಗಳು.
ಮನಸು,
ಹೌದು... ಬದುಕೊಂದು ಕನವರಿಕೇ ಸರಿ ಒಮ್ಮೊಮ್ಮೆ... ತುಂಬಾ ಧನ್ಯವಾದಗಳು :)
ವಾಣಿ,
ಥ್ಯಾಂಕ್ಸು :)
ಸುಮ, ಪ್ರವರ ಕೆ.ವಿ.,
ತುಂಬಾ ಧನ್ಯವಾದಗಳು.
ಸುಬ್ರಹ್ಮಣ್ಯ ಅವರೆ,
ಸ್ಪಂದನೆಗೆ ತುಂಬಾ ಧನ್ಯವಾದಗಳು. ಇದು ನಿರಾಸೆಯಲ್ಲಾ.. ನಿರ್ಲಿಪ್ತತೆ. ಆಶಾಕಿರಣವೂ ಜೊತೆಯಲ್ಲಿದೆ.. ಆದರೆ ಅಂತಿಮ ಪಯಣದತ್ತ ಒಂಟಿ ಹೆಜ್ಜೆ ಇಡುವಾಗ ಮೂಡುವ ಒಂದು ತರಹದ ಶೂನ್ಯಭಾವದ ಕನವರಿಕೆಯಷ್ಟೇ.. ಕಲ್ಪನೆ/ವಾಸ್ತವ ಎರಡೂ :)
Chennagide kavana.
ಪ್ರತ್ಯುತ್ತರಅಳಿಸು:)
-Raghu
ಇಳಿಸಂಜೆಯ ಮನದ ದುಗುಡ ಚೆನ್ನಾಗಿ ಚಿತ್ರೀಸ್ದ್ದಿರಾ... ಬೂತದ ಭೂತಗಳ ಕನವರಿಕೆ ಜೊತೆ ಇಹಿ ನೆನಪುಗಳು ಸೇರಿದ್ದಾರೆ ಚೆಂದಿತ್ತು...
ಪ್ರತ್ಯುತ್ತರಅಳಿಸು