ಶುಕ್ರವಾರ, ಮೇ 7, 2010
ನೀನಾರ ಅರಿವಿಗೆ ನಿಲುಕಿಹೆ ಹೇಳು?
ಆತ ನಿನಗೊಲಿದಿಲ್ಲ, ನೀನವನ ಒಲವಲ್ಲ,
ನಿನ್ನ ಪ್ರೀತಿ ಏಕ ಮುಖ, ಆತ ಸಕಲ ವಲ್ಲಭ
ನಿನ್ನೆದೆಯ ತುಂಬ ಅವನದೇ ನಿನಾದ,
ಗಾರುಡಿಗನ ನೃತ್ಯಕೆ ವಿಶ್ವವೆಲ್ಲಾ ಸ್ತಬ್ಧ
ನಿನ್ನ ಉಸಿರೊಳಗೋ ಅವನದೇ ಹೆಸರು
ಇರುವರವಗೆ ಸಾಸಿರ ನಾರಿಮಣಿಯರು
ಪ್ರೇಮ ವಂಚಿತ ಅಭಾಗಿನಿ, ಸದಾ ವಿರಹಣಿ ನೀ-
ಎಂದು ಗೀಚಿದನೊಬ್ಬ ಕವಿ,
ದೈವ ಲಿಖಿತ ತಪಸ್ವಿನಿ, ಅನನ್ಯ ಪ್ರೇಮ ಸಂಜೀವಿನಿ-
ಹೊಗಳಿ ಹಾಡಿದ ಮಗದೊಬ್ಬ.....
ಒಮ್ಮೆ ಕನಿಕರಿಸಿ, ಮಗದೊಮ್ಮೆ ಮೇಲಿರಿಸಿ
ಚುಚ್ಚಿ, ಕೆಣಕಿ, ಹೊಗಳಿ, ನರಳಿ - ನಿನ್ನ ಮೇಲೆ
ಬರೆದರೆಷ್ಟೋ ಕಥೆ, ಕವನ - ಮೇಲಿಂದ ಮೇಲೆ
ಕೇಳಲಿಲ್ಲ, ನೋಡಲಿಲ್ಲ, ಇವರಾರೂ ನಿನ್ನ ಬದುಕ ವ್ಯಥೆ
ಅದೆಷ್ಟು ಕಾಲ ನೀ ಹೀಗೆ ಕುಣಿಯಬೇಕೋ ಇವರ ಜೊತೆ!
ನೋಟದಾಚೆಯ ಭಾವ ಕಂಡಷ್ಟೂ ಕಾಣದು,
ಶೂನ್ಯದೊಳೂ ಬಹು ದೊಡ್ಡ ಸಂಪತ್ತಿಹುದು
ಅಸ್ತಿತ್ವರಹಿತ ಪ್ರೀತಿಯಾನುಭೂತಿ
ಸಾವಿನಾನಂತರದ ಬದುಕಿಗೂ ಹಾದಿ
ಇದನರಿಯದ ಮೂಢರ ನೋಡಿ....
ಆಗೊಮ್ಮೆ ಈಗೊಮ್ಮೆ ನಗುತಿಹಳು ಆಕೆ
- ತೇಜಸ್ವಿನಿ ಹೆಗಡೆ
[ಚಿತ್ರ ಕೃಪೆ : http://harekrishnabooks.com.au/index.php?main_page=index&cPath=10]
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
25 ಕಾಮೆಂಟ್ಗಳು:
ನೈಸ್ ಕಣ್ರೀ..
Tejakka,
sikkapatte ishta aatu...
tumba chanaagi baradde..
very nice... :-)
ತು೦ಬಾ ಚೆನ್ನಾಗಿದೆ.
ತೇಜಸ್ವಿನಿ,
ನೋಟವನ್ನು ಸರಿ ಪಡಿಸುವ ಕವನ ಎಂದು ಹೇಳಲೆ?
ನಿಮ್ಮ ಕನ್ನಡ ಶಬ್ಧ ಭಂಡಾರ ಮಾತ್ರ ಊಹೆಗೂ ನಿಲಕದು!!
ಬೆಂಗಳೂರಿ ನಲ್ಲಿ ಇರವ್ಕೂ ಇಷ್ಟೊಂದು ಕನ್ನಡ ಕ್ಲಿಷ್ಟ ಪದಗಳು ಗೊತ್ತಿರ್ತು ಅಂದ್ರೆ- ನಿಮ್ಗೆ Hats Off.
ತುಂಬಾ ಚೆನ್ನಾಗಿ ಬರ್ದಿದಿರಾ.
ಧನ್ಯವದಗಳು ತೇಜಸ್ವಿನಿ ಅಕ್ಕ ಅವರೇ.
ಚೆ೦ದವಿದೆ ರಾಧೆಯ ಮನದಳಲು....
ಅವಳ ಮೇಲಿನ ಎಷ್ಟೋ ಕಥೆ-ಕವನಗಳ ಸಾಲಿನಲ್ಲಿ ನಿಮ್ಮದೂ ಒ೦ದು ಸೇರಿತು...
ಬದುಕಿನ ನ೦ತರವೂ ಅವಳನ್ನು ಬದುಕಿಸಿಟ್ಟಿರುವ ನಮ್ಮನ್ನು ನೋಡಿ ರಾಧೆ ನಗುತಲಿಹಳಲ್ಲವೇ?
ತೇಜಸ್ವಿನಿ ಚೆನ್ನಾಗಿದೆ.... ಕೊನೆಯ ಸಾಲುಗಳು...
"ಶೂನ್ಯದೊಳೂ ಬಹು ದೊಡ್ಡ ಸಂಪತ್ತಿಹುದು
ಅಸ್ತಿತ್ವರಹಿತ ಪ್ರೀತಿಯಾನುಭೂತಿ
ಸಾವಿನಾನಂತರದ ಬದುಕಿಗೂ ಹಾದಿ".... ಏಕೊ ಗೊತ್ತಿಲ್ಲ ಸಿಕ್ಕಾಪಟ್ಟೆ ಇಷ್ಟ ಆಯ್ತು.... ತುಂಬಾ touchy ಆಗಿದೆ....
ತೇಜಸ್ವಿನಿಯವರೇ,
ಕವನ ತು೦ಬಾ ಚೆನ್ನಾಗಿದೆ.
kavana tuba tumbaa chanda!hege holeyutte madame nimage ishtu olle kavana!It is a wonderful gift you have.
ತುಂಬಾ ಚೆನ್ನಾಗಿದೆ ಕಣ್ರೀ,
ರಾಧೆಯ ಮನಸ್ಸೇ ಹೇಳಿದಂತೆ ಹೇಳಿ ಬಿಟ್ರಲ್ಲಾ?
ಆಕೆಯೇನಾದರೂ ನಿಮ್ಮ ಕನಸಿನಲ್ಲ್ಲಿ ಬಂದು ತನ್ನ ಅಳಲು ತೊದಿಕೊಂದಿಂದ್ಲಾ ಅಂತ!
nice!
ಚೆನ್ನಾಗಿಯೇ ರಾಧೆಯ ಮನದೊಳಗೆ ನುಸುಳಿದಿರಿ..good.
Very Nice. ...
ಮಾನಸ ಅವರೇ..ಬ್ಲಾಗ್ ಹೆಸರಲ್ಲೇ ನಿಮ್ಮನ್ನು ಕರಿಯೋಣ ಅಂತ..:)
ಸ್ವಲ್ಪ ನೀತಿ..ಸ್ವಲ್ಪ ಪ್ರೀತಿ..ಕೊನೆಗೆ ಜೀವನ...ಚೆನ್ನಾಗಿದೆ ನಿಮ್ಮ ಸಾಲುಗಳು..
ನಿಮ್ಮವ,
ರಾಘು.
ಚೆನ್ನಾಗಿದೆ.. ರಾಧೆಯ ಒಡಲ ಮಾತುಗಳೇ ಕವಿತೆಯಾಗಿ ಬಂದಂತಿದೆ.
nice
very nice kavana
ಮೊದಲ ಪ್ಯಾರಾದ ಸಾಲುಗಳು ಸುಲಲಿತವಾಗಿ ಓದಿಸುತ್ತವೆ, ಒಟ್ಟಾರೆ ಕವನ ಇಷ್ಟವಾಯ್ತು...
ಒಮ್ಮೆ ಕನಿಕರಿಸಿ, ಮಗದೊಮ್ಮೆ ಮೇಲಿರಿಸಿ
ಚುಚ್ಚಿ, ಕೆಣಕಿ, ಹೊಗಳಿ, ನರಳಿ - ನಿನ್ನ ಮೇಲೆ
ಬರೆದರೆಷ್ಟೋ ಕಥೆ, ಕವನ - ಮೇಲಿಂದ ಮೇಲೆ
ಕೇಳಲಿಲ್ಲ, ನೋಡಲಿಲ್ಲ, ಇವರಾರೂ ನಿನ್ನ ಬದುಕ ವ್ಯಥೆ
ತೇಜಸ್ವಿನಿ ಭಾವ ಕೆದಕಿ ಭಾವನೆಗಳಡಿಯಲ್ಲಿ ಬೆಂದ ಮನದ ದುಗುಡವೇ.. ಎನಿಸುತ್ತೆ..
ಮೇಲಿನ ಸಾಲುಗಳು ಋಣಾತ್ಮಕಗಳನ್ನು ತೋರಿಸಲೆಂದೇ ಕೆಲವೇ ಧನಾತ್ಮಕಗಳನ್ನು ವೈಭವೀಕರಿಸುವುದೂ ಒಂದು ಹವ್ಯಾಸ ಕೆಲವರಿಗೆ ಅಲ್ಲವೇ....ಬಹಳ ಚನ್ನ ನಿಮ್ಮ ಈ ನಿಮ್ಮ ಕವನ...ಅದಕ್ಕೆ ಪೂರಕವಾಗಿದೆ ರೇಖಾ ಚಿತ್ರ..
@ಸುಶ್,
ಥಾಂಕ್ಸ್ ಕಣ್ರೀ...
@ದಿವ್ಯಾ,
ಸಿಕ್ಕಾಪಟ್ಟೆ ಖುಶಿ ಆತು ನಿನ್ನ ಕಮೆಂಟ್ ನೋಡಿ. ರಾಶಿ ಧನ್ಯವಾದಗಳು... :)
@ಪರಾಂಜಪೆ ಅವರೆ,
ಧನ್ಯವಾದಗಳು.
@ಕಾಕಾ,
ನೋಟವನ್ನೊಂದೇ ಅಲ್ಲ, ಅನುಭೂತಿಯನ್ನೂ ಕೂಡ ಅನ್ನಬಹುದೇನೋ..:) ಏನಿದ್ದರೂ ಕವನ ಎನ್ನುವುದು ಅವರವರ.....
@ಚಂದ್ರು ಅವರೆ,
ನಾನು ಉ.ಕ.ದ ಶಿರಸಿಯವಳು, ಬೆಳೆದಿದ್ದೆಲ್ಲಾ ದ.ಕ., ಮಂಗಳೂರಿನಲ್ಲಿ. ಈಗಿರುವುದು ಬೆಂಗಳೂರಿನಲ್ಲಿ..(ಕಳೆದೈದು ವರುಷಗಳಿಂದಷ್ಟೇ). ಎಲ್ಲೇ ಇದ್ದರೂ ಕನ್ನಡ ಭಾಷೆ ಮಾತ್ರ ಒಂದೇ ಅಲ್ಲವೇ? :)
ನಿಮ್ಮ ಅಭಿಮಾನಕ್ಕೆ, ಮೆಚ್ಚುಗೆಗಳಿಗೆ ತುಂಬಾ ಧನ್ಯವಾದಗಳು...:)
@ಸೀತಾರಾಂ ಅವರೆ,
ಇದು ರಾಧೆಯ ಮನದಳಲೂ ಹೌದು ಹಾಗೆಯೇ ರಾಧೆಯಂತವರ ಮನದಳಲೂ ಹೌದು... ಬದುಕು, ಸಾವು ಎನ್ನುವುದು ಈ ಒಂದು ಅಪೂರ್ವ ಅನುಭೂತಿಗೂ ಮೀರಿದ್ದು ಎನ್ನುವುದು ನನ್ನ ಅನಿಸಿಕೆ.
ಹೌದು ನನ್ನ ಕವನದಲ್ಲಿ ರಾಧೆ ನಮ್ಮ ಪೆದ್ದು ತನಕ್ಕೆ ನಗುತ್ತಿದ್ದಾಳೆ :)
ಧನ್ಯವಾದಗಳು.
@ಶ್ಯಾಮಲಕ್ಕ,
ನನಗೂ ಆ ಸಾಲುಗಳೇ ಆಪ್ತವೆನಿಸಿದವು ಏಕೋ ಏನೋ... :) ತುಂಬಾ ಧನ್ಯವಾದಗಳು.
@ಚಂದ್ರಶೇಖರ್ ಅವರೆ,
ತುಂಬಾ ಧನ್ಯವಾದಗಳು.
@ಕೃಷ್ಣಮೂರ್ತಿ ಅವರೆ,
ಹ್ಮ್ಂ.. ನೀವು ಇಷ್ಟೊಂದು ಹೊಗಳಿ ಅಟ್ಟಕ್ಕೇರಿಸಿದರೆ ಮತ್ತೆ ನಾನು ಇದಕ್ಕಿಂತ ಉತ್ತಮ ಕವನ ಬರೆಯಲಾಗದು ನೋಡಿ... :) ಮೆಚ್ಚುಗೆಗಳಿಗೆ ಬಹು ಆಭಾರಿ... ತುಂಬಾ ಧನ್ಯವಾದಗಳು.
@ಮನದಾಳದಿಂದ,
ರಾಧೆಯೂ ಓರ್ವ ಹೆಣ್ಣು ತಾನೆ? ಹಾಗಾಗಿ ಕನಸೊಳಗೆ ಬಂದೇ ಹೇಳಬೇಕೆಂದಿಲ್ಲ ಬಿಡಿ... ಹಾಂ.. ಈ ಕವನವನ್ನೋದಿ ಕನಸಲ್ಲಿ ಬಂದರೂ ಬರಬಹುದು... ಇನ್ನಾದರೂ ನನ್ನ ಬಗ್ಗೆ ಕೊರಯುವುದನ್ನು, ಗೀಚುವುದನ್ನು ನಿಲ್ಲಿಸಿಬಿಡಿ ಎಂದು ತಾಕೀತು ಮಾಡಲು.... :)
ತುಂಬಾ ಧನ್ಯವಾದಗಳು.
@ವೆಂಕಟಕೃಷ್ಣ ಅವರೆ,
ರಾಧೆಯ ನೋವು, ತಳಮಳ, ಸಾತ್ವಿಕತೆ, ಸಮಚಿತ್ತ - ಕೇವಲ ನಾವು ಊಹಿಸಬಹುದಷ್ಟೇ... ಹೀಗೇ ಎಂದು ಹೇಳಲು ಆ ಕೃಷ್ಣ ಪರಮಾತ್ಮನೊಬ್ಬನಿಗೇ ಸಾಧ್ಯ :) ತುಂಬಾ ಧನ್ಯವಾದಗಳು.
@ಸುಬ್ರಹ್ಮಣ್ಯ ಅವರೆ,
ತುಂಬಾ ಧನ್ಯವಾದಗಳು...
@ರಾಘು ಅವರೆ,
ತುಂಬಾ ಸಂತೋಷ :) ತುಂಬಾ ಧನ್ಯವಾದಗಳು.
@ವಿನಾಯಕ ಅವರೆ,
ಮಾನಸಕ್ಕೆ ಸ್ವಾಗತ. ತುಂಬಾ ಧನ್ಯವಾದಗಳು.
@ಮನಸು,
ತುಂಬಾ ಥಾಂಕ್ಸ್.
@ವೇಣು ವಿನೋದ್,
ಮೆಚ್ಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು.
@ಜಲನಯನ,
ಹೀಗೂ ಆಗಿರಬಹುದು. ಹೀಗೇ ಎಂದೂ ಹೇಳಲಾಗದು... ಒಬ್ಬರಿಗೆ ಸರಿ ಕಂಡಿದ್ದು, ಇನ್ನೊಬ್ಬರಿತೆ ತಪ್ಪೆನಿಸಬಹುದು. ಒಬ್ಬನ ಕಣ್ಣಲ್ಲಿ ರಾಧೆ ವಿರಹಿ ಎನಿಸಿಕೊಂಡರೆ, ಇನ್ನೊಬ್ಬನಿಗೆ ತ್ಯಾಗಮಯಿ, ಪ್ರೇಮಮಯಿ..... ತಮ್ಮ ತಮ್ಮ ಪರಿಧಿಯೊಳಗೇ ಬಂಧಿಸಿ ನೋಡಿದರೆ ಒಂದು ಮುಖ ಮಾತ್ರ ಕಾಣುವುದು ಅಲ್ಲವೇ?
ಮೆಚ್ಚುಗೆಗಳಿಗೆ ತುಂಬಾ ಧನ್ಯವಾದಗಳು.
cholo baradde, ista aathu.
ತೇಜಸ್ವಿನಿ ಹೆಗಡೆ-,
ಚೆನ್ನಾಗಿದೆ..
ಸೊಗಸಾದ ಪದಗಳನ್ನು ಬಳಸಿದ್ದೀರಿ..
ತೇಜಸ್ವಿನಿ ಮೇಡಮ್,
ತುಂಬಾ ಚೆನ್ನಾಗಿ ಕವನ ಬರೆದಿದ್ದೀರಿ...ಅರ್ಥಪೂರ್ಣ ಪದಗಳ ಜೋಡಣೆ ಕೂಡ ಇಷ್ಟವಾಯಿತು.
Superb Madam :)
ಮೇಡಂ,
'ನೀನಾರ ಅರಿವಿಗೆ ನಿಲುಕಿಹೆ ಹೇಳು?' ಹೆಸರೇ ಹೇಳುವಂತೆ ಇದೊಂದು ಮೆಲುದನಿಯ ಕವನ.
'ಆತ ನಿನಗೊಲಿದಿಲ್ಲ, ನೀನವನ ಒಲವಲ್ಲ,'
'ಅಸ್ತಿತ್ವರಹಿತ ಪ್ರೀತಿಯಾನುಭೂತಿ
ಸಾವಿನಾನಂತರದ ಬದುಕಿಗೂ ಹಾದಿ
ಇದನರಿಯದ ಮೂಢರ ನೋಡಿ....
ಆಗೊಮ್ಮೆ ಈಗೊಮ್ಮೆ ನಗುತಿಹಳು ಆಕೆ'
ಹೀಗೆ ಸಾಲು ಸಾಲುಗಳೂ ತಟ್ಟುತ್ತವೆ.
ಭೇಷ್....
nice. ಇಷ್ಟವಾಯ್ತು.
ಕೃಷ್ಣರಾಧೆಯರ ಬಗ್ಗೆ ಸಿಕ್ಕಾಪಟ್ಟೆ ಕೊರೆಯುವವರು ತಿಳಿದುಕೊಳ್ಳುವಂತಿದೆ.;)
ಕಾಮೆಂಟ್ ಪೋಸ್ಟ್ ಮಾಡಿ