ಈ ಧಾರಾವಾಹಿಯ ಕುರಿತು ಮೊದಲೇ ಬರೆಯಬೇಕೆಂದಿದ್ದೆ. ಆದರೆ ಸಮಯಾವಕಾಶವಾಗಲಿಲ್ಲ. ಚಂದ್ರಕಾಂತ ಎಸ್. ಅವರ "ಬತ್ತದ ತೊರೆ" ಬ್ಲಾಗಿನಲ್ಲಿ ಈ ಧಾರಾವಹಿಯ ಕುರಿತಾದ ಕಿರು ಬರಹವನ್ನೋದಿ ತುಂಬಾ ಸಂತಸವಾಯಿತು.
ಕೇವಲ ಅಸಂಬದ್ಧ ಪ್ರೀತಿ, ಮದುವೆ, ಡೈವೊರ್ಸ್, ಅತ್ತೆ-ಸೊಸೆ ಜಗಳ, ಷಂಡ್ಯಂತ್ರಗಳಂತಹ ಜಾಳು ಜಾಳಾದ ಕಥೆಗಳನ್ನೊಳಗೊಂಡ, ವಾಸ್ತವಿಕತೆಯ ಗಂಧಗಾಳಿಯೂ ಇಲ್ಲದಂತಹ ಧಾರಾವಾಹಿಗಳ ನಡುವೆ "Colors" ಚಾನೆಲ್ನಲ್ಲಿ ಬರುತ್ತಿರುವ "ಬಾಲಿಕಾ ವಧು" ಧಾರಾವಾಹಿ ತುಂಬಾ ಭಿನ್ನವಾಗಿ ನಿಲ್ಲಿತ್ತದೆ ಎಂದರೆ ಖಂಡಿತ ತಪ್ಪಾಗಲಾರದು. ಬಾಲಿಕಾ ವಧುವಾಗಿರುವ "ಆನಂದಿ" ಹಾಗೂ ವರನಾಗಿರುವ "ಜಗದೀಶ"ನ ಅಭಿನಯ ಯಾರನ್ನೂ ಬೆರಗುಗೊಳಿಸುತ್ತದೆ. ಈ ಧಾರಾವಾಹಿಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ "ಬತ್ತದ ತೊರೆ" ಬ್ಲಾಗ್ಗೆ ಭೇಟಿಕೊಡಬಹುದು.
10 ಕಾಮೆಂಟ್ಗಳು:
ಇತ್ತೀಚೆಗೆ ಬರುತ್ತಿರುವ ಧಾರಾವಾಹಿಗಳನ್ನು ನೋಡಲಿಕ್ಕೇ ಮನಸ್ಸಾಗುತ್ತಿಲ್ಲ ತೇಜಸ್ವಿನಿ. ನೋಡದೇ ಇರುವುದೇ ಉತ್ತಮ ಕೆಲಸ ಅನಿಸುವಂತಿವೆ. ಆದರೆ, ನೀವು ನೀಡಿರುವ ಮಾಹಿತಿ ಕುತೂಹಲ ಹುಟ್ಟಿಸಿದೆ. ನೋಡಲು ಯತ್ನಿಸುತ್ತೇನೆ.
- ಪಲ್ಲವಿ ಎಸ್.
ತೇಜಸ್ವಿನಿ,
ನೀವು ಹಾಕಿರುವ ಬಾಲಿಕಾವಧುವಿನ ಚಿತ್ರಗಳು ಬಹು ಮುದ್ದಾಗಿ ಮೂಡಿಬಂದಿವೆ. ನಾನೂ ಪ್ರಯತ್ನಿಸಿದೆ. ಆದರೆ ನನಗೆ ಹಾಕಲು ಬರಲಿಲ್ಲ.:)
ತೇಜಸ್ವಿನಿ ಮತ್ತು ಚಂದ್ರಕಾಂತ ಇಬ್ಬರಿಗೂ ಹೇಗೆ Thanks ಹೇಳೋದು ಅಂತಾನೆ ಗೊತ್ತಾಗ್ತಾ ಇಲ್ಲ. ನನಗೆ ಅಷ್ಟು ಇಷ್ಟ ಆಯ್ತು. ಅಭಿನಯ ಅಥವಾ ಧಾರವಾಹಿ ಬಗ್ಗೆ ನಿಮ್ಮ ವಿವರಣೆ ಮುಂದೆ ನನಗೆ ಬರೆಯಲು ಪದಗಳಿಲ್ಲ. ತುಂಬಾ ಧನ್ಯವಾಗಳು.
ದಟ್ಸ್ ಕನ್ನಡದಲ್ಲಿ ಶಿರಸಿ ಭವನ ತುಂಬಾ ಚೆನ್ನಾಗಿದೆ.ನಾನಂತೂ ತಡವಾದರೂ(ನನ್ನ ಕಾಮೆಂಟ್ ತರಹ) ಖಂಡಿತ ಟ್ರೈ ಮಾಡ್ತೀನಿ:-).(ಇನ್ನೂ ಮಾಡಿಲ್ಲಾರೀ:-().
ನನಗೂ ಹಾಗು ಧಾರಾವಾಹಿಗಳಿಗು ತುಂಬಾ ದೂರ... :)ಆದರೂ ಈ ಧಾರಾವಾಹಿ ಚೆನಾಗಿರ ಬಹುದು.
ಈ ಚಿತ್ರಗಳನ್ನು ಗಮನಿಸಿದರೆ, ಬಾಲ್ಯ ವಿವಾಹದ ಕುರಿತಾದ ಧಾರಾವಾಹಿ ಎಂದೆನಿಸುತ್ತದೆ..
ನನ್ನ ಮಡದಿ ನನಗೆ ಒತ್ತಾಯ ಮಾಡಿ ತೋರಿಸಿದ್ದರಿಂದ ಬಾಲಿಕಾ ವಧು ನೋಡುತ್ತಿರುವೆ. ಏಕತಾ ಕಪೂರ್ ಧಾರವಾಹಿಗಳಿಂದಾಗಿ ನಾನು ಧಾರವಾಹಿ ನೋಡುವದನ್ನೇ ಬಿಟ್ಟುಬಿಟ್ಟಿದ್ದೆ. ನಿಜವಾಗಿಯೂ ಆ ಪುಟ್ಟ ಹುಡುಗಿ ತನ್ನ ಮುಗ್ಢ ಅಭಿನಯ, ಮಾತುಗಳಿಂದ ಮನ ಸೂರೆ ಗೊಳ್ಳುತ್ತಾಳೆ. ನಿಮಗೂ , ಚಂದ್ರಕಾಂತರವರಿಗೂ ಅನಂತಾನಂತ ಧನ್ಯವಾದಗಳು.
ತೇಜಸ್ವಿನಿ,
ಒಳ್ಳೆಯ ಧಾರಾವಾಹಿಗಳ ಸುಳಿವನ್ನು ಇದೇ ರೀತಿಯಲ್ಲಿ ಕೊಡುತ್ತಿರು.
-ಕಾಕಾ
ಮರೆಯಲಾಗದ ನೆನಪು - 3 YAVAGA BARUTTADE?
ತೇಜಸ್ವಿನಿಯವರೆ,
ಈ ದಿನದ " ಬಾಲಿಕಾವಧು" ನೋಡಿದಿರಾ? ಮತ್ತೊಮ್ಮೆ ಮೊದಲಿಂದ sum up ಮಾಡುತ್ತಿದ್ದಾರೆ
@ಪಲ್ಲವಿ,
ನಿಜ. ಈ ಏಕತಾ ಕಪೂರ್ಳಿಂದಾಗಿ ಒಳ್ಳೆಯ ಧಾರಾವಾಹಿಗಳೇ ಬರದಂತಾಗಿವೆ. ನಾನೂ ನೋಡುತ್ತಿಲ್ಲ. ಆದರೆ ಬಾಲಿಕಾ ವಧು ಮಾತ್ರ ಇವೆಲ್ಲವುಗಳಿಗಿಂತಲ್ಲೂ ತುಂಬಾ ಭಿನ್ನವಾಗಿದೆ. ಕೇವಲ ಬರಹದಲ್ಲಿ ಹೇಳಿದರೆ ಅದರ ಸೊಗಸು ತಿಳಿಯದು. ಒಂದೆರಡು ಭಾಗಗಳನ್ನು ನೋಡಿ ನೀವೇ ಒಪ್ಪುವಿರಿ. ಅಂದಹಾಗೆ ಚಂದ್ರಕಾಂತರು ಹೇಳಿರುವಂತೆ ಈಗ ಬಾಲಿಕಾ ವಧು ಸೀರಿಯಲ್ ಅನ್ನು ಮೊದಲಿನಿಂದ ತುಣುಕುಗಳಾಗಿಯೂ ಹಾಕುತ್ತಿದ್ದಾರೆ(Producers ಹರತಾಳದ ಕಾರಣ ಯಾವ ಚಾನಲ್ನಲ್ಲೂ ಹೊಸ ಕಂತುಗಳು ಪ್ರಸಾರವಾಗುತ್ತಿಲ್ಲ.)
@ಚಂದ್ರಕಾಂತ ಅವರೆ,
ಫೋಟೋಕಿಂತಲೂ ತುಂಬಾ ತುಂಬಾ ಮುದ್ದಾಗಿದ್ದಾಳೆ ಆನಂದಿ. ಧಾರಾವಾಹಿಯಲ್ಲಿ ಅವಳ ಮುಗ್ಧ ಅಭಿನಯ, ಸುಂದರತೆ, ಕೆಲವೊಂದು ಕಡೆ ತೋರುವ ಅವಳ ಗಾಂಭೀರ್ಯ ಎಲ್ಲಾ "Awesome"
ಭಾರ್ಗವಿ,
ತುಂಬಾ ಧನ್ಯವಾದಗಳು. ತೊಂದರೆ ಇಲ್ಲ ಬಿಡಿ. ನಿಧಾನವಾಗಿಯಾದರೂ ಟ್ರೈಮಾಡಿ :) ಶಿರಸಿಭವನಕ್ಕೆ ಭೇಟಿಕೊಡಲು ಮಾತ್ರ ಮರೆಯದಿರಿ ಮತ್ತೆ. :)
@ಶಂಕರ್,
ಇದು ಕೇವಲ ಬಾಲ್ಯವಿವಾಹಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಇದರೊಳಗೆ ಈಗಲೂ ಭಾರತದಲ್ಲಿ ಕೆಲವೊಂದು ಕಡೆ ಯಾವರೀತಿ ಹೆಣ್ಣನ್ನು, ಹೆಣ್ಣು ಮಗುವನ್ನು ಶೋಷಿಸುತ್ತಾರೆ, ಯಾವ ರೀತಿ ಹೆಣ್ಣಿನ ಹಕ್ಕನ್ನು, ಅಸ್ತಿತ್ವವನ್ನು ಅಳಿಸಿಹಾಕಲಾಗುತ್ತದೆ. ಸ್ತ್ರೀಯನ್ನು ಹೇಗೆ ವ್ಯವಸ್ಥಿತವಾಗಿ ಸಮಾಜದ ಡಾಂಭಿಕತೆಯ ನೆಲೆಯಲ್ಲಿ ದಮನಿಸಲಾಗುತ್ತಿದೆ ಎಂಬೆಲ್ಲಾ ವಿಷಯಗಳನ್ನು ಮನಮುಟ್ಟುವಂತೆ ಚಿತ್ರಿಸಲಾಗುತ್ತಿದೆ.
ಮತ್ತೂ ವಿಷೇಶವೆಂದರೆ ಇಲ್ಲಿ(ಪ್ರಸ್ತುತ ಧಾರಾವಾಹಿಯಲ್ಲಿ) ಸ್ತ್ರೀಯನ್ನು ಶೋಷಿಸುವುದು ಕೇವಲ ಪುರುಷನಲ್ಲ. ಸ್ತ್ರೀಯೇ ಇಲ್ಲಿ ಇನ್ನೋರ್ವ ಸ್ತ್ರೀಯ ದಮನಕ್ಕೆ ಪ್ರಮುಖ ಕಾರಣ ಕರ್ತಳು!
@ಪ್ರಕಾಶ್ ಅವರೆ,
ನಿಮಗೂ ಧನ್ಯವಾದಗಳು. ನಾನೂ ಮೊದಲು ಅಪ್ಪಿ ತಪ್ಪಿ ಈ ಧಾರಾವಾಹಿಯನ್ನು ನೋಡಲು ತೊಡಗಿದ್ದು. ಈಗ ತಪ್ಪಿಸಿಕೊಳ್ಳುತ್ತಿಲ್ಲ. ಪ್ರತಿ ಕಂತಿನಲ್ಲೂ ಒಂದು ಹೊಸ ನೀತಿಯ ಜೊತೆ. ಹೊಸ ಪಾಠವನ್ನು ಕಲಿಸುವ ಈ ಧಾರಾವಾಹಿಯನ್ನು ನೋಡಿ ಗ್ರೇಟ್ ಏಕತಾ ಕಪೂರ್ ಕಲಿಯುವುದು ಬಹಳವಿದೆ ಅಲ್ಲವೇ? :)
@ಕಾಕಾ,
ಖಂಡಿತ ಒಳ್ಳೆಯ ವಿಷಯಗಳೇನಿದ್ದರೂ ಮಾನಸದಲ್ಲಿ ಮೂಡಿಸುವೆ. ಧನ್ಯವಾದಗಳು.
@ವಿಕ್ಸ್,
ನೆನಪುಗಳನ್ನೆಲ್ಲಾ ಬೇಗ ಹೊರ ಹಾಕಿದರೆ ಮರೆತುಹೋಗುವ ಸಂಭವವಿದೆ ನೋಡು. ಅದಕ್ಕೇ ನಿಧಾನಿಸುತ್ತಿದ್ದೇನೆ :) ಇಟಲಿಯಿಂದ ಬಂದ ಮೇಲೆ ನಿನ್ನ ಮರೆಯಲಾಗದ ನೆನಪುಗಳನ್ನು(ನೀರಿಗೂ ಹೇಳದಿರುವ) ನನಗೂ ತಿಳಿಸು....:)
@ಚಂದ್ರಕಾಂತ ಅವರೆ,
ನೀವು ಹೇಳಿದ ಮೇಲೆ ಬೆಳಿಗ್ಗೆ ನೋಡಿದೆ. ಧನ್ಯವಾದಗಳು.
ತೇಜಸ್ವಿನಿ
ಬಾಲಿಕಾವಧುವಿನಿಂದ ನೀವು ನನಗೆ ಬಹಳ ಹತ್ತಿರದವರಾಗಿರುವಿರಿ.
ಹಳೆಯ ತುಣುಕುಗಳನ್ನು ಮತ್ತೊಮ್ಮೆ ಪುನರಾವರ್ತಿಸಿದರಲ್ಲಾ,ಅದಕ್ಕಿಂತ ಒಳ್ಳೆ ಸುದ್ದಿ ಇದು. ಈ ಶನಿವಾರ ಅಕಸ್ಮಾತ್ ಬೆಳಿಗ್ಗೆ ೮ಕ್ಕೆ ನೋಡಿದರೆ ಪೂರ್ತಿ ಮೊದಲಿನಿಂದ ಎಲ್ಲ ಎಪಿಸೋಡ್ ಗಳನ್ನೂ ಪ್ರಸಾರ ಮಾಡುತ್ತಿದ್ದಾರೆ. ರಾಣಿಯ ಕತೆ ಬಾಲ್ಯವಿವಾಹದ ಮತ್ತೊಂದು ಕರಾಳ ಮುಖವನ್ನು ಅನಾವರಣ ಮಾಡಿದೆ.
ಕಾಮೆಂಟ್ ಪೋಸ್ಟ್ ಮಾಡಿ