ಬುಧವಾರ, ನವೆಂಬರ್ 28, 2012

ಅಂತರ್ಮಹಲ್


ಪಾದಕ್ಕೆ ಹಚ್ಚಿದ್ದ ಗೊರಂಟಿ ಕೆಂಪು ಕಂಡೊಡನೆ
ಅವಳೊಡಲಾಳದಲ್ಲೆಲ್ಲೋ ನಾಭಿಯೆಂದೆದ್ದು ಬರುವ ಭೀತಿ....
Courtesy : http://trip4me.info
ಇಂದಿಗೆ ದಿವಸ ಇಪ್ಪತ್ತಾಯಿತು!
ಮತ್ತಿಪ್ಪತ್ತು ದಿನ ಸೇರಿ, ಹದಿನೈದು ಕೂಡಿದರೂ ಸಾಕು....
ಸವತಿ ಬರಳು ಮಹಾರಾಜರ ಪಕ್ಕದಲ್ಲಿ
ಆಡಬಹುದು ಹಸುಳೆಯೊಂದು ಮಡಿಲಲ್ಲಿ

ಅಂತಃಪುರದ ಮೂಲೆ ಮೂಲೆಯಲ್ಲೂ
ಮುಲುಗುವ ಭಾವಗಳು, ಜಟಿಲ ಸಿಕ್ಕುಗಳು!
ಒಡ್ಯಾಣ, ಕಾಲ್ಗೆಜ್ಜೆ, ಕಿವಿಯೋಲೆ,  ತೋಳ ಬಂಧಿ,
ಅಂಗಾಂಗಳಡೊನೆ ಮನವೂ ಬಂಧಿ ಅವನಾಜ್ಞೆಯೊಳಗೆ.

ಯಾಗ, ಹೋಮ, ನೇಮ, ನಿಯಮ, ಅವಮಾನವೆಲ್ಲ ಇವಳಿಗೇ
ದುಗುಡ ಮರೆಯಲು, ಪೌರುಷ ಮೆರೆಸಲು ಕಿರಿರಾಣಿ ಅವನಿಗೆ!
ಯಾವ ಮುನಿಯ ಶಾಪವೋ, ಯಾವ ಮನುವ ಶಾಸ್ತ್ರವೋ
ಮದರಂಗಿಯ ಕೆ(ಕ)ಂಪಿಗೂ ಕರಗುವ ಬೆದರಿಕೆ!

ಅದೊಂದು ಇಹುದಲ್ಲಿ, ಯಮುನೆಯ ತಟದಲ್ಲೇ
ಬಿಳಿಯೊಳು ಹದವಾಗಿ, ತುಸು ಹೆಚ್ಚಾಗೇ ಮಿಳಿತವಾಗಿಹ ಕೆಂಬಣ್ಣ,
ಸಾವಿರ ಕೈಗಳ ಮೇಲೆ ನಿಂತೂ ಪ್ರೇಮ ಸಂದೇಶ ನೀಡುವ ತಾಜಮಹಲ್
ಮುಮತಾಜ್‍ಳ ಗೋರಿಯ ಒಳಗೆಲ್ಲೋ ಆಳದಲ್ಲೇ ಉಸಿರಾಡುವ ನೂರ್‌ಜಹಾನ್

ಇದ್ದವಂದು.. ಇಹವಿಂದೂ... ಕಾಣದ, ಕಾಡುವ ಅಂತಃಪುರಗಳು
ಕೇಳುವ ಕಿವಿಗಳು, ನೋಡುವ ಕಣ್ಗಳು, ಆಡುವ ಮಾತುಗಳೆಲ್ಲಾ ಶೂನ್ಯವೆಂದೂ....

-ತೇಜಸ್ವಿನಿ ಹೆಗಡೆ

7 ಕಾಮೆಂಟ್‌ಗಳು:

sunaath ಹೇಳಿದರು...

superb!

ಚಿನ್ಮಯ ಭಟ್ ಹೇಳಿದರು...

ಚೆನಾಗಿದೆ...ಇಷ್ಟವಾಯ್ತು...

Subrahmanya ಹೇಳಿದರು...

ಚೆನ್ನಾಗಿದೆ.

ಸಿಂಧು Sindhu ಹೇಳಿದರು...

ಚೆನಾಗಿದ್ದು ತೇಜ್,

ಮದರಂಗಿಯ ಮದರಂಗಿಯ ಕೆ(ಕ)ಂಪಿಗೂ ಕರಗುವ ಬೆದರಿಕೆ!
ಈ ಸಾಲುಗಳಲ್ಲಿ ಅಡಗಿರುವುದೇ ಅವಳ/ಇವಳ/ ಅವರೆಲ್ಲರ ಅಭದ್ರತೆಯೇ?

ಸಿಂಧು

Swarna ಹೇಳಿದರು...

ತುಂಬಾ ಚೆನ್ನಾಗಿದೆ. ಹೌದು ಅಂತ ಅಂತಃಪುರಗಳು ಇಂದಿಗೂ ಇರುವುದು ನೋವಿನ ಸಂಗತಿ

ವಾಣಿಶ್ರೀ ಭಟ್ ಹೇಳಿದರು...

ishta ate tejakka :) ontara kaduva pada jodane....:)

Ashok.V.Shetty, Kodlady ಹೇಳಿದರು...

Sooper Madam...Very Nice...